<< Back   Veerashaiva Dharma

Published on May 13th 2016 11:36am | Published by Admin

ಕರ್ನಾಟಕದಲ್ಲಿ ವೀರಶೈವ ಧರ್ಮವನ್ನು ವಿಶ್ವಧರ್ಮವನ್ನಾಗಿಸುವದು, ಇಂದು ಪ್ರತಿಯೊರ್ವ ವೀರಶೈವ ಲಿಂಗಾಯತ ಮಹನೀಯರ ಆದ್ಯ ಕರ್ತವ್ಯವಾಗಿದೆ. ಸಹಸ್ರ ಸಂವತ್ಸರಗಳ ಸುದೀರ್ಘ ಹಾಗೂ ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಪ್ರಸ್ತುತ ಧರ್ಮ ಮೇಳೈಸಿಕೊಂಡಿದೆ. ವಿಭಿನ್ನ ಲಿಂಗವಂತ ಧರ್ಮ ಉತ್ಕೃಷ್ಟಶಾಲಿ, ಸತ್ವಪೂರ್ಣ ಸಂಸ್ಕೃತಿಯ ತವರಾಗಿದೆ. ವಿವಿಧತೆಯಲ್ಲಿ ಏಕತೆಯ ಮರ್ಮದ ಅರುಹು ಇರಿಸಿಕೊಂಡ ಸಮನ್ವಯ ಸೂತ್ರ ಅದ್ವಿತೀಯವಾಗಿದೆ. ಅತ್ಯುದ್ಭುತವಾದ ವೈಜ್ಞಾನಿಕ ಸಂಶೋಧನೆ ಹಾಗೂ ಅಸದೃಶ ಸಾಹಸಗಳ ಮೂಲಕ ಆಶ್ಚರ್ಯಕಾರಿಯೆನಿಸುವ ಹೊಸ ಹೊಸ ಸಾಧನೆಗಳಿಂದ ಪ್ರಕೃತಿಯನ್ನೇ ತಮ್ಮಿಚ್ಫೆಯಂತೆ ನಿಯಂತ್ರಿಸಬಲ್ಲ, ಅದ್ಭುತ ಶಕ್ತಿ ಪಡೆದುಕೊಂಡು ಮುಂದುವರೆದಿದೆ. ಅಂತೆಯೆ ಮಾನವ ಪ್ರೇಮ, ಸಹಕಾರ, ಶಾಂತಿ, ಸಮಾನತೆ, ಭಾವೈಕ್ಯತೆಯಂತಹ ಉದಾತ್ತ ಮೌಲ್ಯಗಳನ್ನು ಸಾರುವ ವೀರಶೈವಧರ್ಮದ ಮಹಾಸಭಾ ಇಂದು ಅದ್ಧೂರಿಯ ಶತಮಾನೋತ್ಸವ ಆಚರಿಸುವ ಸಂಭ್ರಮದಲ್ಲಿ ನಿರತವಾಗಿದೆ. ಮಹಾಸಭೆಯ ಅಧಿವೇಶಗಳಲ್ಲಿ ಅಧ್ಯಕ್ಷತೆ ವಹಿಸುವವರಿಗೆ ಸದಾ ಸಮಾಜದ ಚಿಂತೆ. ಒಂದೂ ಸಮಸ್ಯೆ ಬಿಡದಂತೆ ಎಲ್ಲ ಸಮಸ್ಯೆ ವಿಚಾರಿಸಿ ಅದಕ್ಕೆ ಪರಿಹಾರ ಸೂಚಿಸಿರುವರು.



ಕನ್ನಡ ನಾಡು, ಪ್ರತಿಷ್ಠಿತ ವೀರಶೈವ ಧರ್ಮದ ಪುಣ್ಯಭೂಮಿ. ಅಖಿಲ ಭಾರತ ವೀರಶೈವ ಮಹಾಸಭೆ ಶತಮಾನದ ಐತಿಹಾಸಿಕ ಮಹತ್ವ ಪಡೆದ ಅನನ್ಯ ಸಂಘಟನೆ. ಅಖಂಡ ಕರ್ನಾಟಕ ಮಾತ್ರವಲ್ಲದೆ ಲಿಂಗವಂತ ಸಂಸ್ಕೃತಿ ದೇಶವಿದೇಶಗಳಲ್ಲಿ ನೆಲೆನಿಂತಿದೆ. ಈ ಕಾರಣದಿಂದ ಹಿಂದೂ, ಕ್ರೆ ಸ್ತ, ಮುಸ್ಲಿಮ್, ಪಾರಸೀ, ಸಿಖ್ ಮೊದಲಾದ ವಿಭಿನ್ನ ಧರ್ಮಗಳು ಭಾಷೆ, ಅಭಿರುಚಿ, ಆಸಕ್ತಿಯ ಕೋಟಿ ಕೋಟಿ ಜನ ಸಮುದಾಯವನ್ನು ಭಾವೈಕ್ಯತೆಯ ಬಂಧನದಲ್ಲಿ ಒಂದಾಗಿ ಸಹಬಾಳ್ವೆಗೆ ಅನುಮತಿಸಿದ್ದು ಅತ್ಯಂತ ನಿರಾಳ ಅಷ್ಟೇ ಸಹಜ ಪ್ರಕ್ರಿಯೆಯಾಗಿದೆ. ಈ ಕಾರಣದಿಂದ ಅಖಿಲ ಭಾರತ ವೀರಶೈವ ಮಹಾಸಭೆಯ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಕಲಾತ್ಮಕವೂ ಅಷ್ಟೇ ವಿನ್ಯಾಸಪೂರ್ಣವೂ ಆಗಿವೆ.



ಭಾಷೆ, ಧರ್ಮ, ಕಾಲದ ಚೌಕಟ್ಟನ್ನು ಮೀರಿ ಲಿಂಗವಂತರೆಲ್ಲರೂ ಸತ್ಯ, ದಯೆ, ಅಹಿಂಸೆ, ಶಾಂತಿ. ಸಮಾನತೆ ಸಹಕಾರಗಳಂತಹ ಸಾಂಪ್ರದಾಯಕ ಮೌಲ್ಯಗಳನ್ನು ಬೋಧಿಸಿ ಜನಮಾನಸದಲ್ಲಿ ಚಿರಂತನವಾಗಿ ಉಳಿದಿರುವದು ಸುವಿದಿತ. ವೀರಶೈವ ಮಹಾಸಭೆ ತನ್ನ ಸರ್ವಮುಖಗಳನ್ನು ಒಳಗೊಂಡಿದೆ. ಅಂತರಂಗ ಮತ್ತು ಬಹಿರಂಗದ ಸಂಸ್ಕೃತಿ ಸಂಪತ್ತನ್ನು ಕುರಿತು ಸಂಶೋಧಿಸುವ, ಅದರ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವ ಅವಶ್ಯಕತೆ ಇಂದಿದೆ. ಲಿಂಗವಂತರ ಬಗೆಗಿನ ಅರಿವನ್ನು ಜನಹೃದಯದಲ್ಲಿ ಬಿತ್ತರಿಸುವ, ಅನಂತಮುಖಿಯಾದ ವಿಶ್ವಜ್ಞಾನವನ್ನು ವೀರಶೈವ ಜ್ಞಾನವನ್ನಾಗಿ ಪರಿವರ್ತಿಸಿ, ಅದನ್ನು ಜನಪರರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯ ಸಂಸ್ಥೆಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಅಸ್ಮಿತೆ ಅರಿತುದಲ್ಲದೆ, ಕನ್ನಡ ನಾಡಿನ ಧರ್ಮಯಾತ್ರೆ ಸಂಪೂರ್ಣವಾದರೂ ಕನ್ನಡ ಪ್ರಜ್ಞೆ, ಶಕ್ತಿ ಮತ್ತು ಸತ್ಯದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳಿನಳಿಸಬೇಕಿದೆ. ವಿಶ್ವಪ್ರಜ್ಞೆ ಸಮರಸಗೊಂಡು ಸಾಕ್ಷತ್ಕಾರಗೊಳ್ಳಬೇಕೆಂಬುದು ಮಹಾಸಭೆ ನಂಬಿದ ಪರಮ ಗುರಿ ಎನಿಸಿದೆ.



ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕವಾದ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಸತ್ವಪೂರ್ಣವಾಗಿ ದಾಖಲಿಸಿ, ವೀರಶೈವ ಓದುಗ, ಸಹೃದಯರ ಜ್ಞಾನವನ್ನು ವಿಸ್ತರಿಸಿ, ಅದರಲ್ಲಿ ಧರ್ಮ ಸಂಸ್ಕೃತಿಯ ಬಗೆಗಿನ ಹೆಚ್ಚಿನ ಪರಿಚಯ ಮಾಡಿಕೊಡಬೇಕಾದುದು, ಇಂದಿನ ಆವಶ್ಯಕತೆ. ಮಹಾಸಭೆ ಜನಪರವದ ಇಂಥ ಶ್ರವ್ಯಾತ್ಮಕ ಮತ್ತು ದೃಶ್ಯಾತ್ಮಕ ವಾಚನ ಸಾಮಗ್ರಿಯ ಸಮರ್ಪಕ ವಿತರಣ ಪ್ರಕ್ರಿಯೆಯ ಮೂಲಕ ಇಂದು ತನ್ನ ಇಚ್ಫಿತ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದೆ. ಅಂದು, ವೀರಶೈವ ಸಮಾಜದ ಮುಖಂಡರು, ಮುಂದಾಳುಗಳ ದೂರದೃಷ್ಟಿಯ ಯೋಜನೆ ಪರಿಣಾಮ ಮಹತ್ವದ್ದು. ಇಂದು ನಾಡಿನಲ್ಲೆಲ್ಲ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತಹ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತು ಕರ್ನಾಟಕದ ಹಿರಿಮೆ ಗರಿಮೆ ಪ್ರತಿಷ್ಠೆ ಹೆಚ್ಚಿಸಿವೆ.







Total Visitors